ನೆಲದನುಡಿ ನ್ಯೂಸ್, ಮುಳಗುಂದ
ಪಟ್ಟಣದ ಕೆಸಿಸಿ ಬ್ಯಾಂಕ ಶಾಖೆಯಲ್ಲಿ ಧಾರವಾಡ ಕೆಸಿಸಿ ಬ್ಯಾಂಕನ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ, ಹೊಸ ಬೆಳಕು ಯೋಜನೆ ಅಂಗವಾಗಿ ಹೊಸ ಸಾಲ ವಿತರಣೆ ಹಾಗೂ ಠೇವಣಾತಿ ಸಂಗ್ರಹಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೆಸಿಸಿ ಬ್ಯಾಂಕ ನಿರ್ದೇಶಕ ಮಲ್ಲಪ್ಪ ಕಲ್ಲಗುಡಿ ಮಾತನಾಡಿ, ಕೆಸಿಸಿ ಬ್ಯಾಂಕ ಮೂಲಕ ಹತ್ತು ಹಲವು ಯೋಜನೆಗಳಿಂದ ಕೃಷಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾಲ ಸೌಲಭ್ಯ ನೀಡುವ ಮೂಲಕ ಕೃಷಿ ಉದ್ಯೋಗ ಕ್ಷೇತ್ರಗಳ ಸಮಗ್ರ ಬೆಳವಣಿಗೆ ಹಾಗೂ ಸ್ವಾವಲಂಬನೆಗೆ ಬ್ಯಾಂಕ ಸಹಕಾರ ನೀಡುತ್ತಿದ್ದು ಸಹಕಾರಿ ಕ್ಷೇತ್ರದ ಮೂಲಕ ಎಲ್ಲರೂ ಯೋಜನೆಗಳ ಲಾಭ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಷಣ್ಮುಖಪ್ಪ ಬಡ್ನಿ, ಅಶೋಕ ಸೋನಗೋಜಿ, ಕಿರಣ ಕೊಪ್ಪದ, ಕತ್ತಿ, ಬುದ್ದಪ್ಪ ಮಾಡಳ್ಳಿ, ವಿಶ್ವನಾಥ ಲಮಾಣಿ, ಸಿ.ಎಂ. ಹೊನ್ನಪ್ಪನವರ, ಎಸ್.ಎಸ್. ಎರಗುದರಿ, ಎಚ್.ಎಂ. ಮಳ್ಳಣ್ಣವರ, ಎಸ್.ವ್ಹಿ. ಉಪಾಸಿ, ಪಿ.ಐ. ಕೋರ್ಲಳ್ಳಿ, ಗಂಗಾಧರ ಕೋಲ್ಲಾರಿ ಸೇರಿದಂತೆ ಸಹಕಾರಿ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.