ನೆಲದನುಡಿ ನ್ಯೂಸ್, ಗದಗ
ಸೋಮವಾರ ಡಾ. ಪಂಡಿತ್ ಪುಟ್ಟರಾಜ ಕವಿ ರೈತ ಸಂಘದ ವತಿಯಿಂದ ಗ್ರಾಮ ಘಟಕಗಳ ಉದ್ಘಾಟನೆ ಮತ್ತು ಗ್ರಾಮ ಘಟಕಗಳಿಗೆ ಹೊಸ ಸದಸ್ಯರುಗಳ ಸೇರ್ಪಡೆ ಕಾರ್ಯಕ್ರಮ ನಿರೀಕ್ಷಣಾ ಮಂದಿರದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಕದಡಿ, ಮಲಸಮುದ್ರ, ಅಡವಿಸೋಮಾಪುರ, ನರಗುಂದ ತಾಲೂಕು ಖಾನಾಪುರ ಗ್ರಾಮದ ಗ್ರಾಮ ಘಟಕಗಳು ಉದ್ಘಾಟಿಸಲಾಯಿತು ಹಾಗೂ ಹರ್ತಿ, ಅಸುಂಡಿ, ಗ್ರಾಮ ಘಟಕಗಳಿಗೆ ಹೊಸ ಸದಸ್ಯರುಗಳ ಸೇರ್ಪಡೆ ಕಾರ್ಯಕ್ರಮವು ನೆರವೇರಿತು.
ಈ ಸಂದರ್ಭದಲ್ಲಿ ಅಸುಂಡಿ ಗ್ರಾಮದಿಂದ ಅನ್ನಪೂರ್ಣ ಭೂಮಕ್ಕನವರ, ವಿಜಯಲಕ್ಷ್ಮಿ ಕೊಡಲಿ, ಅಕ್ಕಮಹಾದೇವಿ ಹಡಪದ, ಸುಭಾಸರೆಡ್ಡಿ ಭೂಮಕ್ಕನವರ, ಮಕ್ತುಂಸಾಬ ಓಲೆಕಾರ, ಯಲರೆಡ್ಡಿ ರಾಮಣ್ಣವರ, ಬಸವರಾಜ ಮುಂದಿನಮನಿ ಅದೇ ರೀತಿ ಸೊರಟೂರ ಗ್ರಾಮದಿಂದ ಲಲಿತಾ ಕುಡುಒಕ್ಕಲಿಗ, ಶೋಭಾ ಸರಾಪುರ, ಹರ್ತಿ ಗ್ರಾಮದಿಂದ ಯಲ್ಲವ್ವ ನಾವಳ್ಳಿ, ಕದಡಿ ಗ್ರಾಮದಿಂದ ನಾಗನಗೌಡ ಕಗದಾಳ, ಅಡವಿಸೋಮಪುರ ಗ್ರಾಮದಿಂದ ಶರಣಪ್ಪ ಜಕ್ಕಮ್ಮನವರ, ಬಳಗಾನೂರು ಗ್ರಾಮದಿಂದ ಸಾವಿತ್ರಿ ದೊಡ್ಡಮಾರಿ, ಉಮಾ ಕುರ್ತನಾಳ ಇನ್ನೂ ಅನೇಕ ಜನರು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂ.ಪಿ. ಮುಳುಗುಂದ, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ದಾವಲಸಾಬ ನಾಗನೂರ, ಹಾಜಿಅಲಿ ಕೊಪ್ಪಳ, ರಾಜ್ಯ ಸಹ ಕಾರ್ಯದರ್ಶಿ ಶಿರಾಜ ಲಕ್ಕುಂಡಿ, ಚಾಂದಸಾಬ ಬೋದಲೆಖಾನ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸುಧಾ ಬೇವಿನಮರದ, ಚೆನ್ನಪ್ಪ ನಾವಳ್ಳಿ, ರೇಖಾ ಬೆಂತೂರ, ಕವಿತಾ ಗುಡೂದೂರ, ರೇಣುಕಾ ಅರಮನೆ, ಇನ್ನು ಅನೇಕ ಜನ ಕಾರ್ಯಕರ್ತರು ಭಾಗವಹಿಸಿದ್ದರು. ಬಸವರಾಜ ಶಲೆಯಪ್ಪನವರ ನಿರೂಪಿಸಿದರು. ಹಾಜಿಅಲಿ ಕೊಪ್ಪಳ ವಂದಿಸಿದರು.