ನೆಲದನುಡಿ ನ್ಯೂಸ್, ಹೊಳೆಆಲೂರ
ಇಲ್ಲಿನ ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಹೊಳೆ ಆಲೂರ ವತಿಯಿಂದ ಕ.ವಿ.ವಿ. ಯ ಆದೇಶದ ಮೇರೆಗೆ 2023-24 ನೇ ಸಾಲಿನ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವವನ್ನು ದಿ. 23 ಮತ್ತು 24ರಂದು ಆಯೋಜಿಸಲಾಗಿದೆ.
ದಿ. ಸಂಗನಗೌಡ ಪಾಟೀಲರ ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ನಿಸ್ವಾರ್ಥ ಸೇವಾ ಮನೋಭಾವನೆಯ ಹಿನ್ನಲೆಯಲ್ಲಿ, ಸ್ಥಾಪಿತಗೊಂಡು, ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಮ್ಮ ಸಂಸ್ಥೆಯು ಸ್ವಾತಂತ್ಯ ಪೂರ್ವದಲ್ಲಿ(1941) ಜನ್ಮ ತಳೆದು ಗ್ರಾಮಾಂತರ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದದ ಜೊತೆಗೆ ಜ್ಞಾನಾಭಿವೃದ್ಧಿ ಕಾರ್ಯವನ್ನು ನಿರ್ವಹಿಸಿ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿದೆ. ಗ್ರಾಮಾಂತರ ಭಾಗದ ಶ್ರೇಷ್ಠ ಮಹಾವಿದ್ಯಾಲಯವು ನ್ಯಾಕ್ ಸಂಸ್ಥೆಯಿAದ ಮರುಮೌಲ್ಯಾಂಕಿತದಲ್ಲಿ “ಬಿ+” ಗ್ರೇಡ್ ಪಡೆದಿರುವದು ಹೆಮ್ಮೆಯ ವಿಷಯ. ಈ ಹಿನ್ನಲೆಯಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಜಿಲ್ಲೆಯ ಪದವಿ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳ ತಂಡವು ತಪ್ಪದೆ ಆಗಮಿಸಿ ಸಕ್ರಿಯವಾಗಿ ಪಾಲ್ಗೊಳ್ಳಲು ಕೋರಲಾಗಿದೆ. ಈ ವಿಷಯಕ್ಕೆ ಸಂಬAಧ ಪಟ್ಟಂತೆ ಸ್ಪರ್ಧೆಯ ವಿವರಗಳ ನಿಯಮಾವಳಿಗಳ ಮಾಹಿತಿಯನ್ನು ಈಗಾಗಲೆ ಎಲ್ಲ ಮಹಾವಿದ್ಯಾಲಯಗಳಿಗೆ ಇಮೇಲ್ ಮೂಲಕ ಕಳಿಸಲಾಗಿದೆ . ಸ್ಪರ್ಧಾಳುಗಳ ಹೆಸರುಗಳನ್ನು ನಿಯಮಾವಳಿಗಳ ಅನುಗುಣವಾಗಿ ದಿ.19-01-2024ರೊಳಗಾಗಿ ಕಳುಹಿಸಿ ಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರೊ.ವಿ.ಪಿ. ಪಾಟೀಲ (9008200152), ಪ್ರೊ. ಶರಣಯ್ಯ ಬ. ಹಳ್ಳೂರ(9972714327), ಪ್ರೊ.ಎನ್.ಆರ್. ಹಿರೇಸಕ್ಕರಗೌಡರ (8296153360), ಡಾ.ಎಸ್.ಬಿ. ಸಜ್ಜನರ(9945555084), ಡಾ.ಪ್ರಭು ಗಂಜಿಹಾಳ (9448775346), ಡಾ.ಕುಮಾರ ಹಂಜಗಿ(8050022649), ಇವರನ್ನು ಸಂಪರ್ಕಿಸಬಹುದು.
ನೋAದಣಿಯ ಶುಲ್ಕವನ್ನು ಪ್ರಾಚಾರ್ಯರು ಎಸ್.ಕೆ.ವ್ಹಿ.ಪಿ ಸಮಿತಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹೊಳೆ-ಆಲೂರ ಇವರ ಹೆಸರಿನಲ್ಲಿ ಡಿ.ಡಿ ಯನ್ನು ಕಳುಹಿಸಬೇಕು ಎಂದು ಪ್ರಾಚಾರ್ಯ ಡಾ. ಪಿ.ಎಸ್. ಕಣವಿ ತಿಳಿಸಿದ್ದಾರೆ.