ನೆಲದನುಡಿ ನ್ಯೂಸ್, ಲಕ್ಷ್ಮೇಶ್ವರ
ನಾಡ ಹೋರಾಟಗಾರ, ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರನ್ನು ಬಂಧನ ಖಂಡಿಸಿ ಅವರನ್ನು ಕೂಡಲೇ ಬಿಡುಗಡೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಉದ್ದೇಶಿಸಿ ಮಾತನಾಡಿದ ತಾಲೂಕ ಅಧ್ಯಕ್ಷ ಇಸ್ಮಾಯಿಲ್ ಆಡೂರ ಕರವೇ ಮತ್ತು ಕನ್ನಡ ಪರ ಸಂಘಟನೆಗಳು ಬೆಂಗಳೂರು ನಗರದ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಶೇ.60 ಕನ್ನಡ ನಾಮ ಫಲಕಗಳು ಕಡ್ಡಾಯವಾಗಿ ಬಳಸುವಂತೆ ಒತ್ತಾಯಿಸಿ ಸ್ಥಳೀಯ ಪ್ರಾಧಿಕಾರ ಹಾಗೂ ಬಿ.ಬಿ.ಎಂ.ಪಿ. ಮತ್ತು ಸರ್ಕಾರದ ಆದೇಶಗಳಿದ್ದರೂ ಸಹಾ ಸದರಿ ಆದೇಶಗಳನ್ನು ಉಲ್ಲಂಘನೆ ಮಾಡಿ ಆಂಗ್ಲ ಭಾಷೆಗಳಲ್ಲಿ ನಾಮ ಫಲಕಗಳನ್ನು ಹಾಕಿದ್ದು ಸದರಿ ಆಂಗ್ಲ ನಾಮ ಫಲಕಗಳನ್ನು ತೆರವುಗೋಳಿಸಬೇಕೆಂದು ಕಳೆದ ಸುಮಾರು 45 ದಿನಗಳಿಂದ ಕರವೇ ಕಾರ್ಯಕರ್ತರು ಬೆಂಗಳೂರು ನಗರದಲ್ಲಿ ಕರ ಪತ್ರಗಳನ್ನು ನೀಡಿ ಮನವಿ ಮಾಡುತ್ತಾ ಬಂದಿದ್ದರು ಆಂಗ್ಲ ಭಾಷೆಯ ಪ್ರೇಮಿಗಳು ಕ್ಯಾರೆ ಎನ್ನದಿರುವುದು ಕರವೇ ಪ್ರತಿಭಟನೆಗೆ ಕಾರಣವಾಗಿತ್ತು.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನಾಯಕತ್ವದಲ್ಲಿ ಬೆಂಗಳೂರು ನಗರದ ದೇವನಹಳ್ಳಿಯ ಸಾದರಹಳ್ಳಿಗೇಟ್ ಬಳಿ ಸಾವಿರಾರು ಕನ್ನಡ ಪರ ಹೋರಾಟಗಾರರು ಸೇರಿ ಕನ್ನಡದಲ್ಲಿ ಕಡ್ಡಾಯ ನಾಮ ಫಲಕಗಳನ್ನು ಹಾಕಬೇಕೆಂದು ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಟಿ.ಎ. ನಾರಾಯಣಗೌಡರು ಪ್ರತಿಭಟನೆ ಸ್ಥಳಕ್ಕೆ ಬರುವ ಮುನ್ನಾ ಕಾರಿನಲ್ಲಿದ್ದ ಟಿ.ಎ. ನಾರಾಯಣಗೌಡರನ್ನು ಬಂಧಿಸಿದ್ದು ನಾಡದ್ರೋಹದ ಕೆಲಸವಾಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಿ ಟಿ.ಎ. ನಾರಾಯಣಗೌಡರ ಜೊತೆಯಲ್ಲೇ ಕೂಡಿ ಹಾಕಿರುತ್ತಾರೆ.
ಟಿ.ಎ. ನಾರಾಯಣಗೌಡರ ಜೊತೆಯಲ್ಲಿ ಕೂಡಿ ಹಾಕಿರುವ ಕರವೇ ಕಾರ್ಯಕರ್ತರನ್ನು ಬಿಡುಗಡೆ ಗೊಳಿಸಿರುತ್ತಾರೆ. ಆದರೆ ಟಿ.ಎ.ನಾರಾಯಣಗೌಡರು ಮತ್ತು ಅವರ ಜೊತೆಯಲ್ಲಿ ಇಪ್ಪತ್ತೊಂಭತ್ತು ಜನ ಕನ್ನಡ ಪರ ಹೋರಾಟಗಾರನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದನ್ನು ಜಯ ಕರ್ನಾಟಕ ಸಂಘಟನೆ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಟಿ.ಎ.ನಾರಾಯಣಗೌಡರು ಸೇರಿದಂತೆ ಕನ್ನಡ ಪರ ಹೋರಾಟಗಾರರು ಮಾಡಿರುತ್ತಾರೆ. ಇದನ್ನು ಪೊಲೀಸರ ಮುಖಾಂತರ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಮತ್ತು ಬಂಧಿತರಾಗಿರುವ ಟಿ.ಎ. ನಾರಾಯಣಗೌಡರು ಸೇರಿದಂತ ಅಮಾಯಕ ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಇಲ್ಲವಾದರೆ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಎನ್. ಜಗದೀಶ ಹಾಗೂ ಜಯ ಕರ್ನಾಟಕ ಸಂಘಟನೆಯು ಕಾರ್ಯಕರ್ತರು ಬೀದಿಗಿಳಿದು ಹೋರಾಟವನ್ನು ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಆಡೂರ, ಉಪಾಧ್ಯಕ್ಷ ರಮೇಶ ಹಂಗನಕಟ್ಟಿ, ಪ್ರಧಾನ ಕಾರ್ಯದರ್ಶಿ ಇಸಾಕಭಾಷಾ ಹರಪ್ಪನಹಳ್ಳಿ, ರೈತ ಘಟಕದ ಅಧ್ಯಕ್ಷ ರೌದ್ರಗೌಡ ಪಾಟೀಲ್, ಸಂಜೀವ ಪೋತರಾಜ, ಬಸವರಾಜ ಮೆಲ್ಲುರಿ, ಖಾದರಭಾಷಾ ರಿತ್ತಿ, ರಾಜು ಕೆರೆಕೊಪ್ಪದ, ಬಸವಣಪ್ಪ ಮುಕಿ, ಪುಟ್ಟಪ್ಪ ಹರಿಜನ, ಅರಶದ ಬೇಟಗೇರಿ, ಬಿಮಪ್ಪ ತಳವಾರ, ಶಾಹಿದ್, ಎ.ಎಂ. ಮಲ್ಲೂರ, ಇಮಾಮ, ಖಾದರ ಕೊಪ್ಪಳ, ಮಂಜುನಾಥ ಶಿರಹಟ್ಟಿ, ಎಸ್.ಎನ್. ಬಸಾಪೂರ ಮತ್ತು ಮತ್ತಿತರಿದ್ದರು.