ನೆಲದನುಡಿ ನ್ಯೂಸ್, ಲಕ್ಷ್ಮೇಶ್ವರ
ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುವ ಮನೋಭಾವನೆ ಎಲ್ಲರಲ್ಲಿ ಬಂದಾಗ ಅಂತಹ ಸಮಾಜಗಳು ಹೆಚ್ಚು ಹೆಚ್ಚು ಕ್ರೀಯಾಶೀಲವಾಗಿ ಕಾರ್ಯಮಾಡುವ ಕಾರ್ಯವಾಗುತ್ತದೆ, ಸಮಾಜಕ್ಕೆ ಸೇವೆ ಮಾಡುವುದೆ ಒಂದು ಸೌಭಾಗ್ಯ ಎನ್ನುವ ಭಾವನೆ ಮೂಡುವದು ಅವಶ್ಯವಾಗಿದೆ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ವಿ.ಎಲ್. ಪೂಜಾರ ಹೇಳಿದರು.
ಅವರು ಪಟ್ಟಣದ ಶಂಕರಭಾರತಿ ಸಮುಧಾಯ ಭವನದಲ್ಲಿ ದತ್ತಜಯಂತಿಯ ಅಂಗವಾಗಿ ಬುಧವಾರ ಏರ್ಪಡಿಸಲಾಗಿದ್ದ ಹಿರಿಯ ಪದಾಧಿಕಾರಿಗಳಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಿಂದ ನನಗೇನಾಗಿದೆ ಎನ್ನುವ ಮನೋಭಾವನೆ ಬೇಡ, ಸಮಾಜಕ್ಕೆ ನಮ್ಮಿಂದ ಆಗಿರುವ ಕೊಡುಗೆ ಏನಿದೆ ಎನ್ನುವ ಪ್ರಶ್ನೆಯನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷರಾಗಿ ನಾರಾಯಣಭಟ್ ಪುರಾಣಿಕ ಮತ್ತು ಕಾರ್ಯದರ್ಶಿಯಾಗಿ ಕೆ.ಎಸ್. ಕುಲಕರ್ಣಿಯವರು ಎರಡು ದಶಕಗಳಿಗೂ ಹೆಚ್ಚು ಕಾಲ ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ಯುವಕರು ಈ ಸೇವೆಯಲ್ಲಿ ಮುಂದೆ ಬರಲಿ ಎನ್ನುವ ಉದ್ದೇಶದಿಂದ ಹೊಸಬರಿಗೆ ಅವಕಾಶ ಮಾಡಿಕೊಡುವ ಜೊತೆಗೆ ಸಮಾಜಕ್ಕೆ ಸದಾ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವದು ಹೆಮ್ಮೆಯ ಸಂಗತಿಯಾಗಿದ್ದು, ಮುಂಬರುವ ಪದಾಧಿಕಾರಿಗಳು ಸಮಾಜದ ಸಂಘಟನೆ ಜೊತೆ ನಿಯಮಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವದು ಅಗತ್ಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕೆ.ಎಸ್. ಕುಲಕರ್ಣಿ ಅವರು ಇಲ್ಲಿನ ಬ್ರಾಹ್ಮಣ ಸಮಾಜದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆಕಿರುವುದೆ ನನ್ನ ಸೌಭಾಗ್ಯವಾಗಿದೆ. ಇಲ್ಲಿ ನಾವು ಮಾಡಿರುವ ಸೇವೆ ಅಲ್ಪ ಪ್ರಮಾಣದಲ್ಲಿ ಎಂದುಕೊAಡಿದ್ದೇವೆ, ಇನ್ನೂ ಸಮಾಜಕ್ಕೆ ನಮ್ಮಿಂದಾದ ಸೇವೆ, ಸಹಕಾರ ನೀಡಲು ಸದಾ ಸಿದ್ದರಾಗಿದ್ದೇವೆ, ನಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ಕೃಷ್ಣ ಕುಲಕರ್ಣಿ, ದೃವರಾಜ ಬೆಟಗೇರಿ, ವೆಂಕಣ್ಣ ಗುಡಿ, ಆರ್.ಎಚ್. ಕುಲಕಣಿ, ಗುರುರಾಜ ಪಾಟೀಲಕುಲಕರ್ಣಿ, ಕೆ.ಎಸ್. ಕುಲಕರ್ಣಿ, ಅರವಿಂದ ದೇಶಪಾಂಡೆ, ಶಂಕರ ಬೆಟಗೇರಿ, ಡಿ.ಪಿ. ಹೇಮಾದ್ರಿ, ಡಾ.ಪ್ರಸನ್ನ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಅನೂಜಾ ಪೂಜಾರ, ಶಾಲಿನಿ ಬೆಟಗೇರಿ, ಸಾವಿತ್ರಿ ದೇಶಪಾಂಡೆ, ಮೀನಾಕ್ಷಿ ಸರ್‌ದೇಶಪಾಂಡೆ, ವೀಣಾ ಪಡ್ನೀಸ್, ಮೇಘಾ ಸಾಹುಕಾರ, ಗಿರಿಜಾಬಾಯಿ ಕುಲಕರ್ಣಿ, ಕಮಲಾಬಾಯಿ ಪುರಾಣಿಕ, ಗೀತಾಬಾಯಿ ದೇಶಪಾಂಡೆ, ರಾಧಾ ಕುಲಕರ್ಣಿ, ಅಕ್ಷತಾ ಕುಲಕರ್ಣಿ, ಸೀಮಂತಿನಿ ಕುಲಕರ್ಣಿ, ಅಂಭುಜಾ ಬೆಟಗೇರಿ ಸೇರಿದಂತೆ ಅನೇಕರಿದ್ದರು.