ನೆಲದನುಡಿ ನ್ಯೂಸ್, ಮುಂಡರಗಿ
ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘ ಮುಂಡರಗಿ ರವರ ಆಶ್ರಯದಲ್ಲಿ ದಿ. 02 ರಂದು ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ಮುಂಡರಗಿ ಅಂಚೆ ಕಚೇರಿ ಎದುರು ಅಸಹಾಯಕ ಚಳುವಳಿಯ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜನ ಕಲ್ಯಾಣ ಯಾತ್ರೆಯ ಸರ್ಕಾರಗಳಿಗೆ ಜರೂರ ಪತ್ರಗಳನ್ನು ಸಲ್ಲಿಸಲಾಯಿತು.
ಬಸವರಾಜ ಯಲ್ಲಪ್ಪ ನವಲಗುಂದ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜಿಲ್ಲಾ ಜನ ಪ್ರತಿನಿಧಿಗಳು ಮುಂಡರಗಿ ತಾಲೂಕಿಗೆ ಅನ್ಯಾಯ ಮೋಸ ಮಾಡುತ್ತಾ ಬಂದಿದ್ದಾರೆ. ಮುಂಡರಗಿ ತಾಲೂಕಿನ ವಿಧಾನಸಭಾ ಕ್ಷೇತ್ರವನ್ನು ಕಿತ್ತುಕೊಂಡಿದ್ದಾರೆ, 2014ರ ರೈಲ್ವೆ ಮುಂಗಡ ಪತ್ರದಲ್ಲಿ ಮಂಜೂರಾದ ಗದಗ -ಹರಪನಹಳ್ಳಿ ರೈಲ್ವೆ ಮಾರ್ಗವನ್ನು ಜಾರಿಗೆ ತಂದಿಲ್ಲ, ಕೊಪ್ಪಳ-ಮುಂಡರಗಿ ರಾಷ್ಟ್ರೀಯ ಹೆದ್ದಾರಿ ರದ್ದು ಮಾಡಿದರು, ಮುಂಡರಗಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಮಾಡದೇ ಇರುವುದು, ಬಗರ್ ಹುಕುಂ ಹಕ್ಕು ಪತ್ರ ಹಂಚಿಕೆ ಮಾಡುವುದು, ಪಿ.ಟಿ.ಸಿ.ಎಲ್. ಕಾಯ್ದೆ 1978 ಪುನರ್ ಸ್ಥಾಪನೆ ಮಾಡುವುದು, ಮುಂಡರಗಿ ತಾಲೂಕು ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ರಿ.ಸ.ನಂ. 24ರ 25 ಎಕರೆ 36 ಗುಂಟೆ ಕೃಷಿ ಜಮೀನಿನಲ್ಲಿ 1008 ವಿನ್ಯಾಸಗಳನ್ನು ಮಾಡಿದ್ದು ಇರುತ್ತದೆ ಅದರಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರುರವರು ಪ್ರಧಾನ ಮಂತ್ರಿ ಆಯುಷ್ಮಾನ ವಸತಿ ಯೋಜನೆಯಡಿಯಲ್ಲಿ ನಿವೇಶನ ನಿರ್ಮಾಣ ಮಾಡಿ ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವಾರು ಪ್ರತಿಭಟನೆಗಳನ್ನು ಮಾಡಿದರು ಕೂಡಾ ಯೋಜನೆಗಳನ್ನು ಜಾರಿಗೆ ತರದೇ ಇರುವ ಜನ ವಿರೋಧಿ ಸರ್ಕಾರದ ನೀತಿಗಳನ್ನು ಖಂಡಿಸಿ ಅಂಚೆ ಪತ್ರ ಚಳುವಳಿಯನ್ನು ನಡೆಸಲಾಯಿತು. ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಅಸಹಾಯಕ ಚಳುವಳಿ ಜನ ಕಲ್ಯಾಣ ಯಾತ್ರೆಯು ದಿ.09 ರಂದು ಕಾಶಿ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುಭಾಷ ಕುಂಬಾರ, ಬಸಪ್ಪ ತಿಮ್ಮಪ್ಪ ವಡ್ಡರ, ರವಿ ಪಾಟೀಲ, ಯಮನಪ್ಪ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.