Monday, December 23, 2024
Homeಸುದ್ದಿವಿಶ್ವ ಗುರು ಆಗೋದು ಯೋಗ ಮತ್ತು ಆಧ್ಯಾತ್ಮದಿಂದ ಮಾತ್ರ: ಹಿರೇಮಠ

ವಿಶ್ವ ಗುರು ಆಗೋದು ಯೋಗ ಮತ್ತು ಆಧ್ಯಾತ್ಮದಿಂದ ಮಾತ್ರ: ಹಿರೇಮಠ

ನೆಲದನುಡಿ ನ್ಯೂಸ್, ಗದಗ

2024ರ ಹೊಸ ವರುಷ ಹೊಸ ಬೆಳಕಿನ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಸಂಸ್ಕೃತಿ ಭವನ ವಿಶೇಷ ಹಾಗೂ ಶಕ್ತಿಶಾಲಿ ವಾತವಾರಣ ನೀಡಿ ಸಾವಿರಾರು ಜನರಿಗೆ ನವ ಚೈತನ್ಯವನ್ನು ನೀಡಿತು. ನವ ಉತ್ಸಾಹ ತುಂಬುವ ನೃತ್ಯ ಜ್ಯೋತಿ ಶ್ರೀ ಕಲಾತಂಡದ ಮಕ್ಕಳಿಂದ ನಡೆಯಿತು. ಸಂಗೀತ ಕಲೆಯಿಂದ ಬದುಕಿನ ಕಲೆಯನ್ನು ತುಂಬಲು ಹೊಸ ಹಾಡನ್ನು ಕಟ್ಟಿ ಹಾಡಲಾಯಿತು.

ಕಾರ್ಯಕ್ರಮದಲ್ಲಿ ಗುರಣ್ಣ ಬಳಗಾನೂರ್, ಡಾ. ಎಸ್.ಎಸ್. ಹಿರೇಮಠ, ಗೋವಿಂದರಾಜ್ ಕುಷ್ಟಗಿ, ಪ್ರಸನ್ನರೇಣಕ್ ಸ್ವಾಮಿ, ಪಿ.ಸಿ. ಶಾಬಾದಿಮಠ, ನಾಗರಾಜ್ ನರಗುಂದ, ಬಸವರಾಜ ಬಿಂಗಿ, ಜಯದೇವಿ ಮಣಸಗಿ, ಅಂದಾನಯ್ಯ ವಿಭೂತಿ, ಇವರಿಂದ ದೀಪಾರಾಧನೆಯ ಜೊತೆಗೆ 2024ರ ನೂತನ ಪಾಕೇಟ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ನವಪೀಳಿಗೆಗೆ ಆದರ್ಶರಾಗಿರುವ ಇತ್ತೀಚಿಗೆ ಯೋಗ ವಿಜ್ಞಾನದಲ್ಲಿ ಎಫೆಕ್ಟ್ಸ್ ಆಫ್ ಯೋಗ ನಿದ್ರಾಹೀನ, ಹೈಪರ್‌ಟೆನ್ಷನ್ ವಿಷಯದ ಕುರಿತು ಡಾಕ್ಟರೇಟ್ ಪದವಿ ಪಡೆದ ಡಾ.ಎಸ್.ಎಸ್. ಹಿರೇಮಠ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಶಸ್ತಿಗೆ ದಾರಿ ಪ್ರಯತ್ನ. ನಮ್ಮ ಪ್ರಯತ್ನ ಪ್ರಾಮಾಣಿಕ, ನಿರಂತರ ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಅಭ್ಯಾಸವಿರಬೇಕು. ಅಷ್ಟಾಂಗ ಯೋಗ ಕೇವಲ ದೇಹಕ್ಕೆ ಮಾತ್ರ. ಆದರೆ ಈ.ವಿ.ವಿ ಕಲಿಸುವ ರಾಜಯೋಗದಲ್ಲಿ ಯೋಗ ಮತ್ತು ಅಧ್ಯಾತ್ಮ ಬೆಸೆದಿರುವುದರಿಂದ ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯದ ಭಾಗ್ಯವನ್ನು ಪಡೆಯಲು ಸಹಜ ದಾರಿಯಾಗಿದೆ. ಭಾರತ ವಿಶ್ವ ಗುರು ಆಗೋದು ಯೋಗ ಮತ್ತು ಆಧ್ಯಾತ್ಮದಿಂದ ಮಾತ್ರ. ಎಲಾ ಜನತೆಗೆ ಒತ್ತಡದಿಂದ ಮುಕ್ತ ಮಾಡುವ ಕೆಲಸ ಈ.ವಿ.ವಿ ಮಾಡುತ್ತಿದೆ ಎಂದರು.

ಗುರಣ್ಣ ಬಳಗಾನೂರ್ ಮಾತನಾಡಿ, ಸಹಕಾರಿರಂಗದಲ್ಲಿ ಸೇವೆ ಸಲ್ಲಿಸಿದ್ದು ಕರ್ನಾಟಕ ಸರ್ಕಾರ ಗುರುತಿಸಿ ಸಹಕಾರರತ್ನ ಪ್ರಶಸ್ತಿ ನೀಡಿದ್ದು ಬಹಳ ಖುಷಿಯನ್ನು ತಂದಿದೆ. ಈ ಅಧ್ಯಾತ್ಮ ಕೇಂದ್ರದಲ್ಲಿ ಯೋಗ, ಧ್ಯಾನ, ವೈಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಜನರಿಗೆ ಆಧ್ಯಾತ್ಮದ ಕಡೆಗೆ ಅರಿವನ್ನು ಮೂಡಿಸುವ ಕೆಲಸ ಈಶ್ವರೀಯ ವಿಶ್ವ ವಿದ್ಯಾಲಯ ಮಾಡುತ್ತಿದೆ ಎಂದು ಹೇಳುತ್ತಾ ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸ್ಥಳೀಯ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಮಾತನಾಡಿ, ಮಾನವನ ಸಹಜ ಗುಣ ಹೊಸತನ ಬಯಸುವುದು. ನಾವೆಲ್ಲರೂ 2024ನೇ ವರ್ಷಕ್ಕೆ ಕಾಲಿಟ್ಟದ್ದೀವಿ. ಹೊಸ ವರ್ಷಕ್ಕೆ ನಮ್ಮ ಜೀವನದಲ್ಲಿ ಹೊಸ ಸಂಸ್ಕಾರ, ಹೊಸ ಗುಣ, ಹೊಸ ಶಕ್ತಿಯನ್ನು ಬರಮಾಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ನಾವು ಏನು ಗಳಿಸುತ್ತೆವೆ ಅದು ಶಾಶ್ವತವಾಗಿ ಉಳಿಯಬೇಕು, ನಮಗೆ ಕೊನೆ ತನಕ ರಕ್ಷಣೆಕೊಡಬೇಕು. ಪರಿಸ್ಥಿತಿಯ ಸಮಯದಲ್ಲಿ ಸ್ವ ಸ್ಥಿತಿಯಲ್ಲಿರಬೇಕು. ಜಗತ್ತಿನಲ್ಲಿ ನಾವು ಸಂಪಾದನೆ ಮಾಡೋದು ನಶ್ವರವಾದದ್ದು ಆದರೆ ಸದಾ ನನ್ನದು, ನನ್ನ ರಕ್ಷಣೆಗೆ, ನನ್ನ ಜೀವನದ ಸಮರ್ಥತೆಗೆ, ಶಾಶ್ವತವಾಗಿ ಪಡೆದುಕೊಳ್ಳಲು ಅಧ್ಯಾತ್ಮದಿಂದ ಮಾತ್ರ. ಆತ್ಮದ ಬಗ್ಗೆ ಯಥಾರ್ಥವಾದ ಅಧ್ಯಯನವೇ ಅಧ್ಯಾತ್ಮ. ಜೀವನದಲ್ಲಿ ಮನುಷ್ಯನು ಹುಟ್ಟಿದಾಗಿನಿಂದ ಮಾಡೋದು, ಆಹಾರ, ಬಟ್ಟೆ, ವಸತಿ ಎಲ್ಲಾ ದೇಹಕ್ಕಾಗಿ. ಬಹಳ ಅಚ್ಚುಕಟ್ಟಾಗಿದೇ ಹಕ್ಕಾಗಿ ದೊಡ್ಡ ಮನೆ ಕಟ್ಟುತ್ತೇವೆ. ಈ ದೇಹಕ್ಕೆ ಅಡುಗೆ ತಯಾರಿಸಲು ಒಂದು ಕೋಣೆ, ಮಲಗಲು ಒಂದು ಕೋಣೆ, ಕುಳಿತು ಟಿ.ವಿ. ನೋಡಲು ಒಂದು ಕೋಣೆ, ಊಟ ಮಾಡಲು ಒಂದು ಕೋಣೆ, ಈ ದೇಹಕ್ಕೆ ಸ್ನಾನ ಮಾಡಲು ಒಂದು ಕೋಣೆ, ದೇವರ ಕೋಣೆಯಾತಕ್ಕಾಗಿ? ಭಾರತದಲ್ಲಿ ಭಾರತೀಯರು ದೇವರನ್ನು ಜೊತೆ ಮಾಡಿಕೊಂಡು ದೇವರ ಕೋಣೆ ಮಾಡಿಕೊಂಡಿರುವುದು ಆತ್ಮನಿಗಾಗಿ. ಪರಮಾತ್ಮನ ಜೊತೆಗೆ ಮನಸ್ಸು, ಬುದ್ಧಿಯನ್ನು ಏಕಾಗ್ರ ಮಾಡಿ ಶಾಂತಿ, ಶಕ್ತಿ, ಜ್ಞಾನವನ್ನು ತುಂಬಿಕೊಳ್ಳಲು ದೇವರಕೋಣೆ ಇರುವುದು. ಈ ರೀತಿ 2024ರಲ್ಲಿ ಬೆಳಗ್ಗೆ 04 ರಿಂದ 05 ಗಂಟೆಯವರೆಗೆ ಶಕ್ತಿಶಾಲಿ ತಪಸ್ಸು ಮಾಡೋಣ. 15 ದಿನಕ್ಕೊಮ್ಮೆ ಮೌನ ಹಾಗೂ ತಪಸ್ಯಾ ದಿನ ಮಾಡಿಕೊಳ್ಳೋಣ. ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ಅಧ್ಯಾತ್ಮ ಜ್ಞಾನದ ಜೊತೆ ಸಂಘಟಿತವಾಗಿ 24 ನಿಮಿಷ ಮೆಡಿಟೇಶನ್ ಮಾಡೋಣ. ಪ್ರತಿಯೊಬ್ಬರು 1 ವರ್ಷದಲ್ಲಿ 24 ಜನರಿಗಾದರೂ ಬಡಿದೆಬ್ಬಿಸಿ ನವ ಚೈತನ್ಯ ತುಂಬಿಸಿರಿ. ಈ ರೀತಿ ನವ ವರ್ಷಕ್ಕೆ ದಶ ಸೂತ್ರಗಳನ್ನು ನೀಡಲಾಯಿತು. ಸ್ವಉನ್ನತಿ, ಜನತೆಯ ಉನ್ನತಿಗಾಗಿ ದಶ ಸೂತ್ರಗಳು ಹೊಂದಿರುವ ವರದಾನಕಾರ್ಡ, ನೂತನ ವರ್ಷದ ಕ್ಯಾಲೆಂಡರ್ ಹಾಗೂ ಪ್ರಸಾದ ತುಂಬಿರುವ ಪರ್ಸ್ನ್ನು ಎಲ್ಲರಿಗೂ ಉಡುಗೊರೆಯಾಗಿ ಕೊಟ್ಟು ಬಂದಿರುವ ಎಲ್ಲರಿಗೂ ಶುಭ ಹಾರೈಸಿ, ಆಶೀರ್ವಾದ ನೀಡಿದರು. ಜನೇವರಿ 12ನೇ ತಾರೀಖಿನಿಂದ 10 ದಿನಗಳವರೆಗೆ ಪ್ರತಿದಿನ 1 ಗಂಟೆ ರಾಜಯೋಗ ಶಿಬಿರಕ್ಕೆ ಹಾಜರಾಗಲು ಕರೆ ನೀಡಿದರು.

ಈ ರಾಜಯೋಗ ಶಿಬಿರ ಈಶ್ವರೀಯ ವಿಶ್ವ ವಿದ್ಯಾಲಯದ ಬಸವೇಶ್ವರ ನಗರ ಶಾಖೆಯಲ್ಲಿ, ಸಿದ್ಧರಾಮೇಶ್ವರ ನಗರ ಶಾಖೆಯಲ್ಲಿ, ಸಿದ್ದಲಿಂಗ ನಗರ ಶಾಖೆಯಲ್ಲಿ, ಹೊಸ್ಪೇಟಚೆಕ್ ಹತ್ತಿರ, ಬೆಟಗೇರಿ ಶಾಖೆಯಲ್ಲಿ ಹಾಗೂ ಶರಣಬಸವೇಶ್ವರ ನಗರದ ಸಭಾಂಗಣದಲ್ಲಿ ಪ್ರತಿದಿನ ಸಂಜೆ 06 ರಿಂದ 07 ಗಂಟೆಯವರೆಗೆ ಏರ್ಪಡಿಸಲಾಗಿದೆ. ಆದ್ದರಿಂದ ಸರ್ವರೂ ತಪ್ಪದೇ ಈ ಶಿಬಿರದಲ್ಲಿ ಭಾಗವಹಿಸಿ. ಲಾಭವನ್ನು ಪಡೆದುಕೊಳ್ಳಬೇಕು ಎಂದು ಸ್ವಾಗತ ಕೋರಿದರು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಕೆರೇಖಾ ಸ್ವಾಗತಿಸಿದರು. ಬಿ.ಕೆ. ಸಾವಿತ್ರಿ ವಂದಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!