ನೆಲದನುಡಿ ನ್ಯೂಸ್, ತುಮಕೂರು
ಹೊಸ ವರ್ಷದ ಮೊದಲ ದಿನ ಶ್ರೀ ಕ್ಷೇತ್ರ ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮಿಗಳಿಂದ ಗೌರವ ಶ್ರೀರಕ್ಷೆ ಪಡೆದದ್ದು ನನ್ನ ಸೌಭಾಗ್ಯ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು
ಕೊಟ್ಯಂತರ ಮಕ್ಕಳಿಗೆ ಅನ್ನ ಅರಿವು ಅಕ್ಷರ ಆಶ್ರಯ ನೀಡಿ ಅವರೆಲ್ಲರ ಬಾಳಿಗೆ ಬೆಳಕು ನೀಡಿದ ತ್ರಿವಿಧ ದಾಸೋಹಕ್ಕೆ ಹೆಸರಾದ ಕಾಯಕಯೋಗಿ ಸಿದ್ಧಗಂಗಾ ಮಠದ ಹಿಂದಿನ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಹೊರಟ್ಟಿ ಅವರು ತದನಂತರ ಇಂದಿನ ಪೀಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕುಶಲೋಪರಿಯನ್ನ ಹಂಚಿಕೊAಡರು.
ಕಳೆದ ಅರ್ಧ ಶರ್ಮಾನಕ್ಕೂ ಹೆಚ್ಚು ಶ್ರೀಮಠದೊಂದಿಗೆ ನನ್ನ ಒಡನಾಟ ಇದೆ. ನಾಡಿನಲ್ಲಿ ಅತ್ಯಂತ ಶ್ರೇಷ್ಠವಾದ ಶ್ರೀ ಮಠ ಜನ ಮಾನಸದಲ್ಲಿ ತನ್ನದೇ ಆದ ಸುವರ್ಣ ಇತಿಹಾಸವನ್ನು ಹೊಂದಿದೆ. ಸೌಹಾರ್ದತೆಗೆ ಮತ್ತೊಂದು ಹೆಸರು ಸಿದ್ದಗಂಗಾ ಮಠ. ಇಲ್ಲಿ ಓದುತ್ತಿರುವ 10,000ಕ್ಕೂ ಹೆಚ್ಚು ಮಕ್ಕಳು ವಿವಿಧ ಜಾತಿ ಮತ ಪಂಥಗಳಿಂದ ಕೂಡಿದವರಾಗಿದ್ದಾರೆ ಶ್ರೀ ಮಠ ಅವರಿಗೆ ಆಶ್ರಯ ನೀಡುವ ಸಂದರ್ಭದಲ್ಲಿ ಎಂದು ಯಾವತ್ತು ಜಾತಿ ಮತ ಪಂಥವನ್ನು ಕೇಳಿದವರಲ್ಲ. ಬಂದವರೆಲ್ಲರಿಗೂ ಅನ್ನ ಆಶ್ರಯ ನೀಡಿ ನಾಡಿನ ಕೋಟ್ಯಾಂತರ ಮಕ್ಕಳಿಗೆ ಜ್ಞಾನದ ಜ್ಯೋತಿಯನ್ನು ಮೂಡಿಸಿದ್ದಾರೆ. ಶತಮಾನಗಳಿಂದ ಹಚ್ಚಿದ ಒಲೆ ಇಂದಿಗೂ ಆರಿಲ್ಲ ಅಂದರೆ ಸೋಜಿಗದ ಸಂಗತಿ .ಯಾರು ಎಷ್ಟೇ ಹೊತ್ತಿಗೆ ಬಂದರು ಅವರಿಗೆ ಪ್ರಸಾದದ ವ್ಯವಸ್ಥೆ ಸದಾ ಇರುತ್ತದೆ ಯಾರನ್ನು ಪ್ರಸಾದವಿಲ್ಲದೆ ತಿರುಗಿ ಕಳಿಸಿದ ಉದಾಹರಣೆ ಇಲ್ಲ. ಶತಮಾನದ ದೊಡ್ಡ ಪವಾಡ ಎಂದರೆ ತಪ್ಪಾಗಲಾರದು.
ಪ್ರಚಾರದಿಂದ ದೂರವಿದ್ದು ನುಡಿದಂತೆ ನಡೆಯುವ ಕಾಯಕದಲ್ಲಿಯೇ ನಂಬಿಕೆ ಇಟ್ಟ ನಾಡಿನ ಮುಂಚೂಣಿಯಲ್ಲಿರುವ ಏಕೈಕ ಮಾದರಿ ಮಠ. ಇಂತಹ ಪವಿತ್ರ ಮಠದ ನೆಲದಲ್ಲಿ ಹೊಸ ವರ್ಷದ ಮೊದಲನೇ ದಿನ ಗದ್ದುಗೆ ದರ್ಶನ ಪಡೆದು ಸಿದ್ದಲಿಂಗ ಶ್ರೀಗಳಿಂದ ಆಶೀರ್ವಾದ ಸಿಕ್ಕಿದ್ದು ನನ್ನ ಪಾಲಿಗೆ ಈ ದಿನ ಅತ್ಯಂತ ಸ್ಮರಣೀಯವಾದದ್ದು ಎಂದು ವಿನಮ್ರವಾಗಿ ನುಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಅಪಾರ ಭಕ್ತರು, ಹಿತೈಷಿಗಳು ಉಪಸ್ಥಿತರಿದ್ದರು.