ನೆಲದನುಡಿ ನ್ಯೂಸ್, ಗಜೆಂದ್ರಗಡ
ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯ ಕೆ.ಎಸ್.ಎಸ್. ಪದವಿ ಕಾಲೇಜಿನಲ್ಲಿ ಇಂದು ಪದವಿ ಪ್ರಥಮ ವರ್ಷದ ಸಾಂಸ್ಕೃತಿಕ, ವಿದ್ಯಾರ್ಥಿಗಳು ಸ್ವಾಗತ ಕಾರ್ಯಕ್ರಮ, ಹಾಗೂ ಸಂಘಿಕ ಮತ್ತು ಎನ್.ಎಸ್.ಎಸ್. ಕ್ರೀಡಾ ಚಟುವಟಿಕೆಗಳ, ಕಾರ್ಯಕ್ರಮ ಜರುಗಿತು.
ಉದ್ಘಾಟನೆಯನ್ನು ಸಂಕೇತ ದಂಡಿನ ಅವರು ದೀಪ ಬೆಳಗಿಸುವದರೂಂದಿಗೆ ಪ್ರಾರಂಭ ಮಾಡಿದರು. ನಂತರ ಮಾತನಾಡಿ ಪದವಿ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಸಾಂಘಿಕ ಚಟುವಟಿಕೆಗಳ ಭಾಗವಹಿಸಿ ತಮ್ಮ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ವಸಂತ ರಾವ್ ಗಾರಗಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಕಲಿಯುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಂತೆ ಅಭ್ಯಾಸವನ್ನು ಮಾಡಿ ಪದವಿ ಮುಗಿದ ಮೇಲೆ ಉದ್ಯೋಗಕ್ಕೆ ಪಡೆದುಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂದು ಮೌಲ್ಯಯುತವಾದ ಮಾತುಗಳನ್ನು ಹೇಳಿದರು
ಪ್ರಸ್ತಾವಿಕವಾಗಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರದೀಪ ಹುಲ್ಲೂರ ಮಾತನಾಡಿ, ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ನಡೆಯುವಂತಹ ಎಲ್ಲಾ ಚಟುವಟಿಕೆಗಳ ಕುರಿತಂತೆ ಸಮಗ್ರವಾಗಿ ಹೇಳಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಚ.ಎನ. ಗೌಡರ ಹಾಗೂ ಆರ್.ವ್ಹಿ. ಪತ್ತಾರ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನಕದಾಸ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.