ನೆಲದನುಡಿ, ನ್ಯೂಸ್, ಗದಗ
ಶಾಲೆ ಎಂಬುದು ದೀಪವಿದ್ದಂತೆ ಆ ದೀಪದಂತೆ ಪ್ರಜ್ವಲಿಸಲು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಅದರಂತೆ ನಗರದ ತಾಜ್‌ನಗರ ಗಂಗಿಮಡಿ ರಸ್ತೆಯಲ್ಲಿರುವ ಹಿದಾಯತ್ ಜೆ.ಯು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷ ಆಚರಣೆಯ ವೇಳೆಯಲ್ಲಿ ಗ್ರೀಟಿಂಗ್ ಕಾರ್ಡ್ಸ್ಗಳನ್ನು ಬಳಸಿಕೊಂಡು ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ, ಗೆಳೆಯ, ಗೆಳತಿಯರಿಗೆ, ಹೊಸ ವರ್ಷದ ಸಂಭ್ರಮಾಚರಣೆಯ ಕುರಿತು ವಿವಿಧ ಕವನಗಳನ್ನು, ಹಿತೈಷಿಯ ಶುಭಾಶಯಗಳು, ಕಥೆಗಳನ್ನು ಅದರಲ್ಲಿ ಬರೆದು ಅದನ್ನು ತಮ್ಮ ಪ್ರೀತಿ ಪಾತ್ರರಾದವರಿಗೆ ಕೊಡುವುದರ ಮೂಲಕ ಹೊಸ ವರ್ಷ ಆಚರಣೆ ಮಾಡುತ್ತಿದ್ದರು.
ಆದರೆ ಈಗ ಅಂತಹ ಗ್ರೀಟಿಂಗ್ ಕಾರ್ಡ್ಸ್ಗಳನ್ನು ಬಳಸದೆ ಮೊಬೈಲ್ ಯುಗದಲ್ಲಿ ಸಂದೇಶಗಳ ಮೂಲಕ ಶುಭಾಶಯಗಳನ್ನು ಕಳಿಸುತ್ತಿದ್ದಾರೆ. ಶಾಲಾ ಮಕ್ಕಳು ಇಂತಹ ಮೊಬೈಲ್‌ಗಳ ಸಂದೇಶಗಳನ್ನು ಬಳಸದೆ ಸ್ವತಹ ತಯಾರಿಸಿದ ಗ್ರೀಟಿಂಗ್ ಕಾರ್ಡ್ಸ್ಗಳನ್ನು ತಯಾರಿಸಿ ಶಾಲೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದು ವಿದ್ಯಾರ್ಥಿಗಳಲ್ಲಿ ಹೊಸ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಆಶ್ಚರ್ಯವೆನಿಸಿತು.
ಇಂದಿನ ಯುವ ಪೀಳಿಗೆ ಗ್ರೀಟಿಂಗ್ಸ್ ಕಾರ್ಡ್ ಎಂದರೇನು ಗೊತ್ತೇ ಇಲ್ಲ ಇಂತಹ ತಂತ್ರಜ್ಞಾನ ಯುಗದಲ್ಲಿ ಜೆಯು ಹಿದಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆ ಹಳೆಯ ಕಾಲದ ಶುಭಾಶಯ ವಿನಿಮಯ ಮಾಡಿಕೊಳ್ಳುವ ಆ ಹಳೆಯ ಪದ್ಧತಿಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಟ್ಟರು. ಕಲಿಕೆಯನ್ನು ಉತ್ತೇಜನಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದು ಶಾಲೆಯ ಶಿಕ್ಷಕರು ಹೇಳಿದರು. ಗ್ರೀಟಿಂಗ್ ಕಾರ್ಡ್ಸ್ಗಳನ್ನು ತಯಾರಿಸಲು ಉತ್ಸುಕತೆಯಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಿ ಪಿ.ಬಿ. ಗುದಗಿ ಹಾಗೂ ಎಲ್ಲ ಶಿಕ್ಷಕಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.