ನೆಲದನುಡಿ ನ್ಯೂಸ್, ಗದಗ
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕ, ಬಸವೇಶ್ವರ ನಗರದಲ್ಲಿ ನಿವೃತ್ತ ನೌಕರರ ಸಂಘದ ಡಿಸೆಂಬರ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಹುಟ್ಟು ಹಬ್ಬದ ಕಾರ್ಯಕ್ರಮ ಜರುಗಿತು.
ಈ ವೇಳೆ ಆಯ್.ಕೆ. ಮಣಕವಾಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸಂಗೀತವು ಮನುಷ್ಯ ಜೀವನದಲ್ಲಿ ಎದುರಾಗುವ ಚಿಂತೆ, ಉದ್ವೇಗ ಮತ್ತು ಅನಾರೋಗ್ಯ ಮುಂತಾದ ಸಮಸ್ಯೆಗಳನ್ನು ದೂರ ಮಾಡುತ್ತದೆ. ನಿತ್ಯ ಸಂಗೀತ ಕೇಳುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ವೃಧ್ಧಿಯಾಗಿ ದೀರ್ಘಾಯುಷಿಗಳಾಗಲು ಸಂಗೀತ ಸಹಾಯ ಮಾಡುತ್ತದೆ. ಹಿರಿಯರು ಆರೋಗ್ಯವಂತರಾಗಿರಲು ನಿತ್ಯ ವಾಯು ವಿಹಾರ, ದ್ಯಾನ, ಪ್ರಾಣಾಯಾಮ, ಸಂಗೀತ ಕೇಳುವದು ಮುಂತಾದವುಗಳ ಕಡೆಗೆ ಒಲವು ತೋರಬೇಕು ಎಂದರು.
ಈ ಕಾರ್ಯಕ್ರಮದ ನೆತೃತ್ವ ವಹಿಸಿದ ಆಯ್.ಕೆ. ಮಣಕವಾಡ ಅವರು ತಮ್ಮ ಸಂಗೀತದ ಹಾರ್ಮೊನಿಯಂ ಸಾಥಿ ನಿಜಲಿಂಗಪ್ಪ ಕರಿಬಿಷ್ಠಿ ಹಾಗೂ ತಬಲಾ ಸಾಥಿ ಅಮರೇಶ ಕರಿಬಿಷ್ಠಿಯವರೊಂದಿಗೆ ಭಾವಗೀತೆ, ಶಿಶುನಾಳ ಶರೀಫರ ತತ್ವಪದಗಳು, ಜಾನಪದ ಹಾಡುಗಳು ಇನ್ನೂ ಅನೇಕ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ನಗರದ ಮುದ್ರಣ ಕ್ಷೇತ್ರದ ಶ್ರೇಷ್ಠ ಉದ್ದಿಮೆದಾರ ಪ್ರಸನ್ನಕುಮಾರ ಶಾಬಾದಿಮಠ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಿ.ಸಿ. ಶಾಬಾದಿಮಠ ಅವರ ೨೦೨೪ನೇ ವರ್ಷದ ತೂಗು ಕ್ಯಾಲೆಂಡರ ಬಿಡಿಗಡೆ ಮಾಡಲಾಯಿತು.
ಪ್ರಸನ್ನಕುಮಾರ ಮಾತನಾಡಿ, ಹಿರಿಯರ ಹುಟ್ಟಹಬ್ಬ ಆಚರಿಸುತ್ತಿರುವುದು ಮತ್ತು ಹುಟ್ಟುಹಬ್ಬ ಆಚರಿಸಿಕೊಂಡವರು ಸಂಭ್ರಮಿಸುತ್ತಿರುವುದನ್ನು ನೋಡುವುದು ಅತ್ಯಂತ ಸಂತೋಷವನ್ನುAಟು ಮಾಡಿದೆ. ಎಲ್ಲರಿಗೂ ದೀರ್ಘಾಯುಷಿಗಳಾಗಲೆಂದು ಶುಭ ಹಾರೈಸಿದರು. ಎಲ್ಲರಿಗೂ ಒಂದು ದಿನ ಮುಂಚಿತವಾಗಿ ಹೊಸವರ್ಷದ ಶುಭಾಷಯಗಳನ್ನು ತಿಳಿಸಿದರು. ಪ್ರಸನ್ನಕುಮಾರ ಶಾಬಾದಿಮಠ ದಂಪತಿಗಳನ್ನು ಮತ್ತು ಹಿರಿಯರಾದ ಅವರ ಮಾತೋಶ್ರಿಯವರನ್ನು ನಿವೃತ್ತ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಅದ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೋ. ಕೆ.ಎಚ್. ಬೇಲೂರ ವಹಿಸಿಕೊಂಡಿದ್ದರು. ಅವರು ಮಾತನಾಡಿ, ನಮ್ಮ ಸಂಘದಲ್ಲಿ ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಜನಿಸಿದ ಸದಸ್ಯರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದರೊಂದಿಗೆ ಶ್ರೇಷ್ಠ ಕಲಾವಿಧರನ್ನು ಕರೆಯಿಸಿ ಮನರಂಜನೆಯ ಕಾರ್ಯಕ್ರಮಗಳನ್ನು ಮತ್ತು ಒಳ್ಳೆಯ ಭಾಷಣಕಾರರಿಂದ ಭಾಷಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಮ್ಮ ಸಂಘದ ವಿಶೇಷ ಎಂದರು. ಹುಟ್ಟು ಹಬ್ಬ ಆಚರಿಸಿಕೊಂಡ ಹಿರಿಯರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ತಿಳಿಸಿ, ಕೇವಲ ದೀರ್ಷಾಯುಷಿಗಳಾದರೆ ಸಾಲದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಖಸೆಂಬರ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ. ಎಸ್.ವ್ಹಿ. ನಾರಾಯಣಪೂರ, ಬಿ.ಸಿ. ಮರಿಗೌಡರ, ಡಿ.ಎಂ. ಬೀರನೂರ, ಪುಷ್ಪಾ ಬಿ. ಹಿರೇಮಠ ಮುಂತಾದವರೊAದಿಗೆ ಒಟ್ಟು ೨೨ ಜನ ಸದಸ್ಯರಿಗೆ ಹುಟ್ಟು ಹಬ್ಬದ ಪ್ರಯುಕ್ತ ನೆನಪಿನ ಕಾಣಿಕೆಗಳನ್ನು ನೀಡಿ, ಗೌರವಿಸಲಾಯಿತು.
ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸದಸ್ಯರಾದ ಎಸ್.ವ್ಹಿ. ನಾರಾಯಣಪೂರ ಮತ್ತು ಬಿ.ಸಿ. ಮರಿಗೌಡರ ಹಾಗೂ ಹಿರಿಯರಾದ ಆರ್.ಡಿ. ಕಪ್ಪಲಿ ಮುಂತಾದವರು ಸಮಯೋಚಿತವಾಗಿ ಮಾತನಾಡಿ, ಕಾರ್ಯಕ್ರಮದ ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಉಪಾದ್ಯಕ್ಷ ಗೌಡಪ್ಪಗೌಡ್ರು, ಜಿ.ವ್ಹಿ ಮಳಲಿ, ನಿವೃತ್ತ ನೌಕರರ ಕೊ-ಆಪ್ ಬ್ಯಾಂಕನ ಚೇರಮನ್ನ ಬಿ.ಎಂ. ಬಿಳೆಯಲಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಎಲ್.ಎಸ್. ನೀಲಗುಂದ, ಬಿ.ಡಿ. ಕಿಲಬನವರ, ಕೆ.ಜಿ. ಹಿರೇಮಠ, ಬಿ.ಬಿ. ಹಾಲನವರ, ಜಿ.ಕೆ. ಮಡಿವಾಳರ, ಟಿ.ಇ. ಕಾಳೆ, ಆರ್.ಡಿ. ಕಪ್ಪಲಿ, ಕೆ.ಎಸ್. ಗುಗ್ಗರಿ, ನಿವೃತ್ತ ಪಿ.ಎಸ್.ಐ. ನಾಗರಳ್ಳಿ, ಎಸ್.ಎಸ್. ಬಳ್ಳಾರಿ, ವಾಯ್.ಕೆ. ಪಡಗಣ್ಣವರ, ಜಿ.ಕೆ. ತಮ್ಮಣ್ಣವರ, ಪ್ರೋ.ಎಂ.ಬಿ. ಹಳ್ಳಿ, ಕಂಬಿಮಠ, ಎಂ.ಎಫ್. ಡೋಣಿ, ಎನ್.ವ್ಹಿ. ಸಜ್ಜನರ ಹಾಗೂ ಇನ್ನೂ ಅನೇಕ ಜನ ಹಿರಿಯ ಸದಸ್ಯರು ಹಾಜರಿದ್ದರು.
ಪ್ರಾರಂಭದಲ್ಲಿ ಬಿ.ಸಿ. ಮರಿಗೌಡರ ಅದ್ಯಕ್ಷರಿಗೆ ಕಾಲರ್ ಧಾರಣೆ ಮಾಡಿದರು. ಜಯಶ್ರೀ ಖಾನಾಪೂರ ಪ್ರಾರ್ಥಿಸಿದರು. ಜಿ.ಕೆ ತಮ್ಮಣ್ಣವರ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಆರ್.ಟಿ. ನಾರಾಯಣಪೂರ ಸಂಘದ ಸದಸ್ಯರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ನಡೆಯಿಸಿಕೊಟ್ಟುರು. ಮತ್ತು ಕಾರ್ಯಕ್ರಮದ ಅಂಗವಾಗಿ ದಾಶೋಹ ಸೇವೆವನ್ನು ನೀಡಿದ ಮಹನಿಯರನ್ನು ಸ್ಮರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಎಂ.ಸಿ. ವಗ್ಗಿ ನಿರೂಪಿಸಿದರು. ಪ್ರೋ. ಎಂ.ಬಿ ಹಳ್ಳಿ ವಂದಿಸಿದರು.