ನೆಲದನುಡಿ ನ್ಯೂಸ್, ಗದಗ
ಭಾರತೀಯ ಜನತಾ ಪಾರ್ಟಿ ಜಿಲ್ಲಾ ಎಸ್.ಟಿ. ಮೋರ್ಚಾ ವತಿಯಿಂದ ರಾಮನಗರಿ ಅಯೋಧ್ಯೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಂತರಾಷ್ಟಿçÃಯ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಿದ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತಶಾ, ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಮುಖಂಡರುಗಳು ಮತ್ತು ಜಿಲ್ಲೆಯ ಎಸ್.ಟಿ. ಮೋರ್ಚಾ ಪದಾಧಿಕಾರಿಗಳ ವತಿಯಿಂದ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತ(ಟಾಂಗಾಕೂಟ) ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವದ ಮೂಲಕ ಅಭಿನಂದನೆಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಟಿ. ಮೋರ್ಚಾ ಮುಖಂಡರುಗಳಾದ ಈಶಪ್ಪ ನಾಯ್ಕರ, ಪ್ರಶಾಂತ ನಾಯ್ಕರ, ಶ್ರೀಪತಿ ಉಡುಪಿ, ವಾಯ್.ಪಿ. ಅಡ್ನೂರ, ಯಲ್ಲಪ್ಪ ಶಿರಿ, ನಾಗರಾಜ ತಳವಾರ, ಮಂಜುನಾಥ ತಳವಾರ, ಬಸವರಾಜ ಕುರಗೋಡ, ಹನಮಂತಪ್ಪ ಚಿಗರಿ, ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥ, ವಸಂತ ನಿರ್ಲಗಿ, ಮುತ್ತಣ್ಣ ಮೂಲಿಮನಿ, ಶಿವಾನಂದ ಚವಡಕಿ, ಕುಮಾರ ಭರಮಗೌಡ್ರ, ಶರಣು ಚಿಂಚಲಿ, ಅಶೋಕ ಕರೂರ, ಆನಂದ ಅಸುಂಡಿ, ಶರಣಪ್ಪ ತಳಕಲ, ಮಂಜುನಾಥ ಶಾಂತಗೇರಿ, ಸೋಮಣ್ಣ ಕರ್ಲವಾಡ, ಶಶಿಧರ ದಿಂಡೂರ, ರಾಮು ವಾಲ್ಮೀಕಿ, ಮಹೇಶ ಬಡಿಗೇರ, ಗೊವಿಂದಪ್ಪ ಪೂಜಾರ, ಮಾಂತೇಶ ಬಾತಾಖಾನಿ, ಸುರೇಶ ಮರಳಪ್ಪನವರ, ಮಂಜು ವಾಲ್ಮೀಕಿ ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.