ನೆಲದನುಡಿ ನ್ಯೂಸ್, ಗದಗ
ಇಂದು ಒಂದು ಜಿಲ್ಲೆ ಒಂದು ಉತ್ಪನ್ನ ಅಂತಾ ದೇಶದ ೭೩೫ ಜಿಲ್ಲೆಗಳಲ್ಲಿ ಒಂದೊAದು ಉತ್ಪನ್ನಗಳಿಗೆ ಪ್ರಾಧ್ಯಾನತೆ ನೀಡಿರುತ್ತಾರೆ. ಜಿಲ್ಲೆಗೆ ಒಣಮೆಣಸಿನಕಾಯಿ ಅಂತಾ ಮಾಡಿದ್ದು ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಅದರಿಂದ ಸಾಕಷ್ಟು ಉತ್ಪನ್ನಗಳನ್ನು ಅದರಲ್ಲಿ ಕೇಂಪು ಚಟ್ನಿ, ಸಿಹಿ ಚಟ್ನಿ ಹೀಗೆ ತಯಾರಿಸಿ ನಾವು ದೇಶ ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತದೆ.
ಜೊತೆಗೆ ಈರುಳ್ಳಿ, ಮೆಕ್ಕೆಜೋಳ ಹೀಗೆ ಅನೇಕ ಉತ್ಪನ್ನಗಳು ನಮ್ಮ ಭಾಗದಲ್ಲಿ ಬೆಳೆಯುವದರಿಂದ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಣ ಮಾಡಿ ರಫ್ತು ಮಾಡುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಇನ್ನೂ(ಮಿಲೇಟ್ಸ್) ಸಿರಿಧಾನ್ಯಗಳಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇರುತ್ತದೆ. ಅವುಗಳನ್ನು ಕೂಡಾ ಸಂಸ್ಕರಣ ಮತ್ತು ಸಿರಿಧಾನ್ಯಗಳಿಂದ ವಿವಿಧ ಉತ್ಪನ್ನಗಳನ್ನು ಕೂಡಾ ಮಾಡಿ ರಫ್ತು ಮಾಡಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ(ವಿ.ಟಿ.ಪಿ.ಸಿ) ಧಾರವಾಡ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಲಿಂ. ಬಸಣ್ಣಾ ಮಲ್ಲಾಡದ ಲಿಂ. ಚನ್ನಬಸಪ್ಪ ಮಹಾದೇವಪ್ಪ ರಾಮನಕೊಪ್ಪ ಹಾಗೂ ಲಿಂ. ಚಂದ್ರಶೇಖರಯ್ಯ ಶಿವಯ್ಯ ಶಾಬಾದಿಮಠ ಇವರುಗಳ ಸ್ಮಾರಕ ದತ್ತಿ ಉಪನ್ಯಾಸದ ನಿಮಿತ್ಯ ಹಮ್ಮಿಕೊಂಡ ರಫ್ತು ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಎಚ್. ಹರಿಜನ ಉದ್ಘಾಟಕರಾಗಿ ಆಗಮಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ(ವಿ.ಟಿ.ಪಿ.ಸಿ) ಧಾರವಾಡದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಟಿ.ಎಸ್ ಮಾತನಾಡಿ, ತಮ್ಮ ಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡಬಹುದು. ಮೊದಲು ಆನ್‌ಲೈನ್‌ದಲ್ಲಿ ಇ.ಜಿ.ಎಫ್.ಟಿ. ಕೋಡ ಪಡೆದುಕೊಳ್ಳಬೇಕು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ನೋಂದಣಿ ಮಾಡುವುದು ಅತೀ ಅವಶ್ಯವಾಗಿದೆ. ರಫ್ತು ಮಾಡುವುದರಿಂದ ತಾವು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈಗಾಗಲೇ ವ್ಹಿ.ಟಿ.ಪಿ.ಸಿ.ಯಿಂದ ಕೂಡಾ ಶ್ರೇಷ್ಠ ರಫ್ತು ಪ್ರಶಸ್ತಿಯನ್ನು ಕೂಡಾ ನೀಡುವುದರೊಂದಿಗೆ ಪ್ರೋತ್ಸಾಹಿಸುತ್ತಾ ಬಂದಿರುತ್ತದೆ. ತಾವು ಹೆಚ್ಚಿನ ಮಾಹಿತಿಗಾಗಿ ನಮ್ಮ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಕೃಷಿ ರಫ್ತು ಸಲಹೆಗಾರ(ಸ್ವಯಂಬೋ ಎಕ್ಸಂ)ಪುಣೇ ಸುಧೀರ ಚಿತ್ರಗಾರ ಮಾತನಾಡಿ, ವಿದೇಶಗಳಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಮೊದಲು ಸಿರಿಧಾನ್ಯಗಳನ್ನು ತಿನ್ನುವುದರಿಂದ ಯಾವುದೇ ತರಹರ ಕಾಯಿಲೆಗಳಿಗೆ ಅವಕಾಶವಿದ್ದಿಲ್ಲ. ಆದರೆ ಈಗ ಅವುಗಳ ಬಳಕೆ ಕಡಿಮೆಯಾದ ಕಾರಣ ನಾವು ಇತರೆ ವಸ್ತುಗಳನ್ನು ಬಳಕೆ ಮಾಡುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಸಿರಿಧಾನ್ಯಗಳನ್ನು ಹೆಚ್ಚಿನ ಬಳಕೆ ಮಾಡಬೇಕು. ಜೊತೆಗೆ ಅವುಗಳನ್ನು ಸಂಸ್ಕರಣ ಮಾಡಿ ದೇಶ ವಿದೇಶಗಳಿಗೆ ರಫ್ತು ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಪ್ರಥಮದಲ್ಲಿ ಸಭೆಗೆ ಆಗಮಿಸಿ ಸರ್ವ ಸದಸ್ಯರು ಸಂಸ್ಥೆಯ ರಫ್ತು ಉಪ ಸಮಿತಿ ಚೇರಮನ್ನ ಶರಣು ವಿ. ಗದಗ ಸ್ವಾಗತಿಸುವ ಮೂಲಕ ರಫ್ತಿನ ಬಗ್ಗೆ ಮಾಹಿತಿ ನೀಡಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ದತ್ತಿ ಉಪನ್ಯಾಸ ಉಪ ಸಮಿತಿ ಚೇರಮನ್ನ ಆನಂದ ಎಲ್. ಪೊತ್ನೀಸ ಮಾತನಾಡಿದರು. ಲಿಂಗೈಕ್ಯರಾದ ಮಹನೀಯರ ಪರಿಚಯವನ್ನು ಸಂಸ್ಥೆಯ ಸಹ ಗೌರವ ಕಾರ್ಯದರ್ಶಿ ರಾಜಣ್ಣಾ ಬಿ. ಮಲ್ಲಾಡದ ಹಾಗೂ ಕೋಶಾಧ್ಯಕ್ಷ ಅಶೋಕ ಕೆ. ಪಾಟೀಲ ಮಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಸಿ. ಮುನವಳ್ಳಿ ವಹಿಸಿ ಮಾತನಾಡಿ, ನಮ್ಮ ಭಾಗದಲ್ಲಿ ಸಾಕಷ್ಟು ಉತ್ಪನ್ನಗಳನ್ನು ಬೆಳೆಯುತ್ತಿದ್ದು. ಆದರೆ ರಫ್ತು ಮಾಡಲು ಮಾಹಿತಿ ಕೊರತೆ ಇರುವುದರಿಂದ ತೊಂದರೆಯಾಗುತ್ತಿದೆ. ನಮ್ಮ ಭಾಗದಲ್ಲಿ ಒಣಮೆಣಸಿನಕಾಯಿ, ಮೇಕ್ಕೆಜೋಳ, ಈರುಳ್ಳಿ, ಸಿರಿಧಾನ್ಯಗಳಾದ ಜೋಳ, ರಾಗಿ, ಸಂಜಿ, ನವಣಿ ಹೀಗೆ ಅನೇಕ ವಸ್ತುಗಳನ್ನು ಬೆಳೆಯುವದರಿಂದ ಅವುಗಳನ್ನು ಕೂಡಾ ರಫ್ತು ಮಾಡಬಹುದು. ಇದರಿಂದ ದೇಶದ ಅಭಿವೃದ್ಧಿಯ ಜೊತೆಗೆ ತಾವು ಕೂಡಾ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಕಾಶ ಎಸ್. ಉಗಲಾಟದ ನಿರೂಪಿಸಿ, ವಂದಿಸಿದರು.