Sunday, December 22, 2024
Homeರಾಜಕೀಯಹಿಂದು ಕಾರ್ಯಕರ್ತರ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

ಹಿಂದು ಕಾರ್ಯಕರ್ತರ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

ನೆಲದನುಡಿ ನ್ಯೂಸ್, ಗದಗ

ಭಾರತೀಯ ಜನತಾ ಪಾರ್ಟಿ ಜಿಲ್ಲಾ ವತಿಯಿಂದ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಶ್ರೀಕಾಂತ ಪೂಜಾರಿ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ ಮೇಲಾಗಿ ರಾಮಭಕ್ತ ಅವರನ್ನು ಉದ್ದೇಶ ಪೂರಕವಾಗಿ ಕರ್ನಾಟಕ ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಪೊಲಿಸರ ಮೇಲೆ ಒತ್ತಡ ಹೇರಿ, ಹಿಂದೂ ಕಾರ್ಯಕರ್ತರ ಬಂಧಿಸಿದೆ.

ಈ ಸರ್ಕಾರ ಬಂದಾಗಿನಿಂದ ಶಿವಮೊಗ್ಗ ಹಾಗೂ ಮಂಗಳವಾರ ನಡೆದ ಹುಬ್ಬಳ್ಳಿ ಹಿಂದು ಕಾರ್ಯಕರ್ತನ ನಿರಾದಾರವಾದ ಮೊಕದ್ದಮೆಯನ್ನು ನೆಪ ಮಾಡಿಕೊಂಡು ಕಾಂಗ್ರೇಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ರಾಮ ಮಂದಿರದ ಉದ್ಘಾಟನೆ ಸಮೀಪಿಸುತ್ತಿದ್ದಂತೆ ಹಿಂದು ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಸಿ ಬಂದಿಸುವ ಕಾರ್ಯವನ್ನು ಮಾಡುತ್ತಾ ಕಾಂಗ್ರೇಸ್ ಸರ್ಕಾರ ಹಿಂದು ವಿರೋಧಿ ಎಂದು ಸಾಬಿತು ಪಡಿಸುತ್ತಿದೆ.

ಕಾರಣ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಸರ್ಕಾರದ ನೀತಿಗೆ ತಾವುಗಳು ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಬಂಧನಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಆದೇಶಿಸಬೇಕೆಂದು ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ನಮ್ಮ ಬೇಡಿಕೆ ಈಡೇರದಿದ್ದಲ್ಲಿ ರಾಜ್ಯವ್ಯಾಪಿ ಹಿಂದು ಕಾರ್ಯಕರ್ತರ ರಕ್ಷಣೆಗೆ ಇನ್ನೂ ತೀವ್ರ ಹೋರಾಟಗಳನ್ನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಶ್ರೀಪತಿ ಉಡುಪಿ, ತೊಟಪ್ಪ ಕುಡರಗಿ, ರವಿ ದಂಡಿನ, ಸಿದ್ದು ಪಲ್ಲೇದ, ಉಷಾ ದಾಸರ, ಅಶೋಕ ನವಲಗುಂದ, ಅಶೋಕ ಸಂಕಣ್ಣವರ, ಅನೀಲ ಅಬ್ಬಿಗೇರಿ, ನಿಂಗಪ್ಪ ಮಣ್ಣೂರ, ಭದ್ರೇಶ ಕುಸ್ಲಾಪೂರ, ಬೂದಪ್ಪ ಹಳ್ಳಿ, ಅಶೋಕ ಕುಡತಿನಿ, ಶೇಖರ ಸಜ್ಜನರ, ಅಶೋಕ ಕರೂರ, ಲಕ್ಷö್ಮಣ ದೊಡ್ಮನಿ, ಜಗನ್ನಾಥಸಾ ಭಾಂಡಗೆ, ಮಹಾದೇವಪ್ಪ ಚಿಂಚಲಿ, ನಿರ್ಮಲಾ ಕೊಳ್ಳಿ, ಮುತ್ತು ಮುಶಿಗೇರಿ, ರಾಘವೇಂದ್ರ ಯಳವತ್ತಿ, ಸುಧೀರ ಕಾಟಿಗರ, ಶಂಕರ ಕಾಕಿ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ವಂದನಾ ವರ್ಣೇಕರ, ವಿಜಯಲಕ್ಷ್ಮೀ ಮಾನ್ವಿ, ಅಕ್ಕಮ್ಮ ವಸ್ತçದ, ಸುರೇಶ ಮರಳಪ್ಪನವರ, ವಾಯ್.ಪಿ. ಅಡ್ನೂರ, ರವಿ ವಗ್ಗನವರ, ಮಂಜುನಾಥಸ್ವಾಮಿ, ಅಪ್ಪಣ್ಣ ಟೆಂಗಿನಕಾಯಿ, ಸುರೇಶ ಮರಳಪ್ಪನವರ, ಅಮರನಾಥ ಗಡಗಿ, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಸ್ವಾತಿ ಅಕ್ಕಿ, ರಮೇಶ ಸಜ್ಜಗಾರ, ಕಮಲಾಕ್ಷಿ ಗೊಂದಿ, ಮಾಂತೇಶ ಬಾತಾಖಾನಿ, ರೇಖಾ ಬಂಗಾರಶೆಟ್ಟರ, ಶಶಿಧರ ದಿಂಡೂರ, ಅಶ್ವೀನಿ ಜಗತಾಪ್, ನವೀನ ಕೊಟೆಕಲ್, ವಸಂತ ಹಬೀಬ, ಕೆ.ಪಿ. ಕೋಟಿಗೌಡ್ರ, ಮಹೇಶ ದಾಸರ, ಶೆಖಣ್ಣ ಕನ್ಯಾಳ, ವೆಂಕಟೇಶ ಕೋಣಿ, ಸಿದ್ದಪ್ಪ ಈರಗಾರ, ಬಸವರಾಜ ಬಡಿಗೇರ ಹಾಗೂ ಇನ್ನು ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!