Sunday, December 22, 2024
Homeಆರೋಗ್ಯರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಅವಶ್ಯ

ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಅವಶ್ಯ

ನೆಲದನುಡಿ ನ್ಯೂಸ್, ಗದಗ

ಭಾರತವು ಹಳ್ಳಿಗಳಿಂದ ತುಂಬಿರುವ ದೇಶ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವAತಹ ದೇಶವಾಗಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳಿಂದ ಜನ ಸಮುದಾಯವನ್ನು ರಕ್ಷಿಸಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವದು ಅತೀ ಅವಶ್ಯವೆಂದು ಕರ್ನಾಟಕ ರಾಜ್ಯ ಏಡ್ಸ ಪ್ರಿವೆಶನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಕೋಶ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕೆ.ಎಸ್.ಎಸ್. ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಆಯ್.ಕ್ಯೂ ಎ.ಸಿ. ಮತ್ತು ಎನ್.ಎಸ್.ಎಸ್. ಎ.ಆ್ಯಂಡ್.ಬಿ ಘಟಕಗಳು ಸಂಯಕ್ತ ಆಶ್ರಯದಲ್ಲಿ ಜಿಲ್ಲೆಯ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳು ಸ್ವಯಂ ಸೇವಕ, ಸೇವಕಿಯರು ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡುವುದರಲ್ಲಿ ಜನಸಮುದಾಯಕ್ಕೆ ತಿಳುವಳಿಕೆ ನೀಡುವುದರ ಮೂಲಕ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿ.ಟಿ.ಓ./ಡ್ಯಾಪೋ ಜಿಲ್ಲೆಯ ಅಧಿಕಾರಿ ಡಾ. ಆರುಂಧತಿ ಕೊರವ ಮಾತನಾಡಿ, ಸಾಂಕ್ರಾಮಿಕ ರೋಗಗಗಳಾದ ಏಡ್ಸ್, ಟಿ.ಬಿ., ಕೊರೋನಾ ಮುಂತಾದ ರೋಗಗಳನ್ನು ನಿರ್ಮೂಲನೆ ಮಾಡಲು ಜನರಿಗೆ ಸೂಕ್ತವಾದ ಮಾರ್ಗದರ್ಶನ ತಿಳುವಳಿಕೆ ನೀಡಿದಲ್ಲಿ ಇಂತಹ ರೋಗಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬಹುದು. ಹಾಗೂ ರಕ್ತದಾನ ಮಾಡುವುದರಿಂದ ಜನರಿಗೆ ಆಗುವ ಅನುಕೂಲತೆ ಹಾಗೂ ಆರೋಗ್ಯವನ್ನು ಕುರಿತು ಸುದೀರ್ಘವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಗವಾನಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸೂಕ್ತವಾದ ಸಮಯ ಪ್ರಜ್ಞೆಯೊಂದಿಗೆ ಪರಿಪಾಲಿಸಬೇಕೆಂದು ಎಂದರು.
ಜಿಲ್ಲೆಯ ಡಾಪ್ಕೊ ವಿಭಾಗದ ಮೇಲ್ವಿಚಾರಕ ಬಸವರಾಜ ಬಿ. ಲಾಳಗಟ್ಟಿ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲ ಕಾರ್ಯಕ್ರಮ ಅಧಿಕಾರಿಗಳಿಗೆ ಏಡ್ಸ್ ನಿಯಂತ್ರಣ ಮತ್ತು ರಕ್ತದಾನ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಷ್ಟಿçÃಯ ಸೇವಾ ಯೋಜನೆಯ ನೋಡಲ್ ಅಧಿಕಾರಿ ಪ್ರೊ. ವ್ಹಿ.ಎಚ್. ಕೊಳ್ಳಿ, ಮಹಾವಿದ್ಯಾಲಯದ ಆಯ್.ಕ್ಯೂಎ.ಸಿ. ಸಂಯೋಜಕ ಪ್ರೊ. ಎಸ್.ಎಸ್. ರಾಯ್ಕರ, ಉಪಪ್ರಾಚಾರ್ಯ ಡಾ. ಜಿ.ಸಿ. ಜಂಪಣ್ಣನವರ, ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ಶಾಂತಕುಮಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರಾಷ್ಟಿçÃಯ ಸೇವಾ ಯೋಜನೆಯ ಅಧಿಕಾರಿ ಪ್ರೊ. ಎಸ್.ಬಿ. ಪ¯್ಲÉÃದ ನಿರೂಪಿಸಿದರು. ಪ್ರೊ. ಶಿವಾನಂದ ಕೊರವರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!