ನೆಲದನುಡಿ ನ್ಯೂಸ್, ಬೆಟಗೇರಿ
ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ಪೂಜ್ಯ ರಂಗಪ್ಪಜ್ಜನವರ ತಪೋಭೂಮಿಯಲ್ಲಿ ಪೆ. ೧೯ರ ಸೋಮವಾರ ಸಂಜೆ ಪೂಜ್ಯ ವೀರಪ್ಪಜ್ಜ ಹಾಗೂ ಪೂಜ್ಯ ರಂಗಪ್ಪಜ್ಜನ ಗುರು ಶಿಷ್ಯರ ೯೫ನೇ ಜೋಡು ರಥೋತ್ಸವವು ಹಾಗೂ ೨೦ರಂದು ಲಘು ರಥೋತ್ಸವವ ಕಾರ್ಯಕ್ರಮ ಹಮ್ಮಿಕೊಳ್ಳಲು ಇಂದು ಸೇರಿದ್ದ ಶ್ರೀ ರಂಗಾವಧೂತರ ಜೀರ್ಣೋದ್ದಾರ ಸೇವಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅದರ ಅಂಗವಾಗಿ ಫೆ. ೧೨ರ ಸೋಮವಾರ ಬೆಳಿಗ್ಗೆ ಜೋಡು ಕಳಸದ ಮೆರವಣಿಗೆ ಹಾಗೂ ಹೊಸದಾಗಿ ಸಿದ್ಧಪಡಿಸಿದ ಗಡ್ಡಿ ತೇರಿನ ಎರವಣಿಗೆ ಜರುಗಿಸಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯ ಸಮಿತಿ ಅಧ್ಯಕ್ಷ ಎಸ್.ಆರ್. ಬಸವಾ ವಹಿಸಿದ್ದರು.
ಈ ಸಂದರ್ಭದಲ್ಲಿ ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರೆಪ್ಪ ಅರಣಿ, ಭೋಜಪ್ಪ ಹೆಗ್ಗಡಿ, ವಿಜಯ ಕಬಾಡಿ, ದುರ್ಗಾಸಿಂಗ್ ಕಾಟೇವಾಲ, ರಾಜು ಕಟಗಿ, ಅಶೋಕ ಮುಳಗುಂದ, ರಂಗಪ್ಪ ದ್ಯಾವಣಸಿ, ಎಂ.ಎನ್. ಐಲಿ, ರುದ್ರಪ್ಪ ಬಾದರದಿನ್ನಿ, ಮಹಾದೇವಸಾ ಮೇರವಾಡೆ, ಗುರನಗೌಡ ಗೌಡ್ರ, ಚೌಡಪ್ಪ ಮಾಂತಗೊAಡ, ಈಶ್ವರ ಜುಟ್ಲಾ, ಶ್ರೀಧರ ಗೆದ್ದಣ್ಣವರ, ರಾಮಣ್ಣ ಮಾದಗುಂಡಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.
ಸಮಿತಿ ಕಾರ್ಯದರ್ಶಿ ಗಣೇಶಸಿಂಗ್ ಬ್ಯಾಳಿ ಸ್ವಾಗತಿಸಿ, ವಂದಿಸಿದರು.